ಸೆಪ್ಟೆಂಬರ್ ರಾಶಿ ಫಲ: ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ವೃತ್ತಿ, ಕೌಟುಂಬಿಕ ಜೀವನ, ಆರೋಗ್ಯ, ಆರ್ಥಿಕ ಸ್ಥಿತಿ, ಲಾಭ, ನಷ್ಟಗಳು ಈ ಸೆಪ್ಟೆಂಬರ್ ತಿಂಗಳಿನಲ್ಲಿ ಹೇಗಿರಲಿವೆ ಎನ್ನುವುದನ್ನು ಇಲ್ಲಿ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಉತ್ತಮವಾಗಿದೆ. ನಿಮ್ಮ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಲಾಬಿಗವನ್ನು ಪಡೆಯುತ್ತೀರಿ. ನಿಮ್ಮ ಅಹಂಕಾರವನ್ನು ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಿರಿ. ಅತಿಯಾದ ಕೋಪ ಒಳ್ಳೆಯದಲ್ಲ. ನಿಮ್ಮ ಕುಟುಂಬದ ಸದಸ್ಯರು ನಿಮಗೆ ಬೆಂಬಲವಾಗಿ ಇರುತ್ತಾರೆ.
ತಿಂಗಳ ಎರಡನೆಯ ಭಾಗದಲ್ಲಿ ನಿಮ್ಮ ಉದ್ಯೋಗ ನಿಮಿತ್ತ ನೀವು ಪ್ರಯಾಣ ಮಾಡಬೇಕಾಗಿರುವ ಸಂದರ್ಭ ಬರುವ ಸಾಧ್ಯತೆ ಇದೆ. ಈ ಪ್ರಯಾಣ ನಿಮಗೆ ಲಾಭವನ್ನು ತರುತ್ತದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಕೆಲಸವನ್ನು ನೀವೇ ಸ್ವಂತಿಕೆಯಿಂದ ಮಾಡಿ, ಮೆರೆಯವರ ಮೇಲೆ ಅವಲಂಬನೆ ಕಡಿಮೆ ಮಾಡಿ. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳಿಂದ ದೂರವಿರಬಹುದು. ನಿಮ್ಮ ಕೌಟುಂಬಿಕ ಮತ್ತು ವೈವಾಹಿಕ ಜೀವನ ಚೆನ್ನಾಗಿರುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ನಿಮ್ಮ ಬಹಳ ಹಳೆಯ ಕಾಯಿಲೆಗಳಿದ್ದರೆ ಅವು ಮತ್ತೆ ಮತ್ತೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಆರೋಗ್ಯಕ್ಕೆ ವಿಶೇಷವಾದ ಗಮನ ನೀಡಿ. ತಿಂಗಳ ಎರಡನೆಯ ವಾರದಲ್ಲಿ ಹಿರಿಯರ ಪ್ರವೇಶದಿಂದ ಕುಟುಂಬದ ಜೊತೆಗೆ ನಿಮಗೆ ಇರುವ ಮನಸ್ತಾಪಗಳು ಸರಿಯಾಗುತ್ತವೆ. ವ್ಯಾಪಾರ ಕ್ಷೇತ್ರದಲ್ಲಿ ಸ್ವಲ್ಪ ಹುಷಾರಾಗಿರಿ. ವಿರೋಧಿಗಳಿಂದ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ.
ಉದ್ಯೋಗದಲ್ಲಿ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ, ಎಚ್ಚರಿಕೆಯ ಹೆಜ್ಜೆ ಇಡಿ. ಚನ್ನಾಗಿ ಕೆಲಸ ಮಾಡಿದರೆ ಹೆಚ್ಚುವರಿ ಆದಾಯ ಸಿಗುವ ಸಾಧ್ಯತೆ ಇದೆ. ಅಗತ್ಯವಿಲ್ಲದ ಖರ್ಚುಗಳಿಗೆ ಕಡಿವಾಣ ಹಾಕಿ, ಉಳಿತಾಯದತ್ತ ಗಮನ ನೀಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ತಿಂಗಳ ದ್ವಿತೀಯ ಭಾಗದಲ್ಲಿ ನಿಮ್ಮ ಕೆಲಸದಲ್ಲಿನ ತೊಂದರೆಗಳು ಬಗೆ ಹರಿಯುತ್ತವೆ. ನೀವು ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರೆ ತಾಳ್ಮೆಯಿಂದ ವ್ಯವಹರಿಸಿ. ಇಲ್ಲದೆ ಹೋದರೆ ಮನಸ್ತಾಪವಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ.
ಮಿಥುನ ರಾಶಿ
ಮಿಥುನ ರಾಶಿಯವರು, ಯಶಸ್ಸು ಪಡೆಯಲ್ಲೂ ಕಠಿಣವಾದ ಪರಿಶ್ರಮ ಪಡಬೇಕು ಜೊತೆಗೆ ಸಮಯವನ್ನು ವ್ಯರ್ಥ ಮಾಡಬಾರದು. ನಿಮ್ಮ ಮನೆಯಲ್ಲೂ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಉದ್ಯೋಗದಲ್ಲಿ ನಿಮ್ಮ ಶತ್ರುಗಳು ನಿಮ್ಮನ್ನು ತುಳಿಯಲು ಯತ್ನಿಸುತ್ತಾರೆ. ಆದರೆ ನೀವು ದುಡುಕದೆ ತಾಳ್ಮೆಯಿಂದ ಸನ್ನಿವೇಶವನ್ನು ನಿಭಾಯಿಸುವುದರಿಂದ ವೃತ್ತಿಯಲ್ಲಿ ಮುಂದೆ ಹೋಗುತ್ತೀರಿ. ನಿಮ್ಮ ಕುಟುಂಬದ ಜೊತೆಗೆ ನಿಮ್ಮ ಬಾಂಧವ್ಯ ವೃದ್ಧಿಯಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಸಾಮಾನ್ಯ ಫಲಿತಾಂಶ ಸಿಗಲಿದ್ದು, ತಿಂಗಳ ಮಧ್ಯದಲ್ಲಿ ಕೆಲಸದ ಒತ್ತಡ ಜಾಸ್ತಿ ಆಗಲಿದೆ.
ತಿಂಗಳ ಎರಡನೆಯ ಭಾಗದಲ್ಲಿ ನಿಮ್ಮ ಕಳಸದ ಕ್ಷೇತ್ರದಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ಹಿತೈಷಿಗಳು ಬೆಂಬಲ ನೀಡುತ್ತಾರೆ. ಪ್ರೀತಿಸುವ ವ್ಯಕ್ತಿಗಳ ಜೊತೆಗೆ, ಹಾಗೂ ನಿಮ್ಮ ಸಂಗಾತಿಯ ಜೊತೆಗೆ (ಮದುವೆಯಾಗಿದ್ದರೆ) ಮನಸ್ತಾಪವಾಗುವ ಸಾಧ್ಯತೆ ಇದೆ. ಆದ್ದರಿಂದ ತಾಳ್ಮೆಯಿಂದ ವ್ಯವಹರಿಸಿ. ತಿಂಗಳ ಅಂತ್ಯದಲ್ಲಿ ಎಲ್ಲ ಮನಸ್ತಾಪಗಳು ಕಳೆದು ನೆಮ್ಮದಿಯ ಜೀವನ ಸಿಗಲಿದೆ.
ಕರ್ಕಾಟಕ ರಾಶಿ
ಸೆಪ್ಟೆಂಬರ್ ತಿಂಗಳಿನಲ್ಲಿ ಕಟಕ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಜೊತೆಗೆ ಮನೆಯ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಯಾರ ಬೆಂಬಲವೂ ಸಿಗದೇ ಇರುವುದರಿಂದ ನೀವು ಕಷ್ಟಪಟ್ಟು ಕೆಲಸ ಮಾಡಿ ನಿಮ್ಮ ಒತ್ತಡಗಳನ್ನು ನಿಭಾಯಿಸಬೇಕಾಗಿರುತ್ತದೆ. ತಿಂಗಳ ಮಧ್ಯಭಾಗದಲ್ಲಿ ಕೆಲಸದಲ್ಲಿ ಪ್ರಗತಿ ಇರಲಿದ್ದು, ವ್ಯಾಪಾರದಲ್ಲಿ ಲಾಭ ಸ್ವಲ್ಪ ಕಡಿಮೆಯಿರಲಿದೆ. ತಿಂಗಳ ಅಂತ್ಯದಲ್ಲಿ ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಮನೆಯ ಹಿರಿಯರು ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ, ಪರಸ್ಥಿತಿ ಸುಧಾರಿಸುತ್ತದೆ. ಹೊರದೇಶಗಳಲ್ಲಿ ಉಡಯಿಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ನಿಮಗೆ ಹೊಸ ಅವಕಾಶಗಳು ಸಿಗಲಿವೆ. ಪ್ರೇಮ ಸಂಬಂಧಗಳಲ್ಲಿ ಮನಸ್ತಾಪ ಕಳೆದು ನಿಮ್ಮ್ ಬಾಂಧವ್ಯ ಗಟ್ಟಿಯಾಗಲಿದೆ. ಕೌಟುಂಬಿಕ ಮತ್ತು ಸಂಗಾತಿಯ ಜೊತೆಗಿನ ವೈವಾಹಿಕ ಸಂಬಂಧ ಗಟ್ಟಿಯಾಗುತ್ತದೆ.
ಸಿಂಹ ರಾಶಿ
ಸೆಪ್ಟೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮನೆ ಅಥವಾ ವಾಹನ ದುರಸ್ತಿ, ಇತರ ಅನಿರೀಕ್ಷಿತ ಖರ್ಚುಗಳಿಂದ ನಿಮ್ಮ ಉಳಿತಾಯದ ಯೋಜನೆಯ ಮೇಲೆ ನಕಾರಾತ್ಮಕ ಪರಿಣಾಮವಾಗುವ ಸಾಧ್ಯತೆ ಇದೆ. ಜೊತೆಗೆ ಅನಾರೋಗ್ಯ ಅಥವಾ ಹಳೆಯ ಕಾಯಿಲೆಗಳ ತೊಂದರೆ ಕಾಡಬಹುದು, ಆದ್ದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ತಮ್ಮ ಹಣವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವುದು ಬಹಳ ಮುಖ್ಯ. ಸಮಯ ವ್ಯರ್ಥ ಮಾಡಬೇಡಿ. ಹಣವನ್ನು ಉಳಿತಾಯ ಮಾಡಲು ಪ್ರಯತ್ನಿಸಿ. ನಿರ್ಲಕ್ಷ್ಯ ಮಾಡಿದರೆ ಅನಗತ್ಯ ತೊಂದರೆಗಳು ಎದುರಾಗಬಹುದು.
ಎರಡನೇ ವಾರದಲ್ಲಿ ಹೂಡಿಕೆ ಮಾಡುವ ಮುನ್ನ ಎರಡು ಬಾರಿ ಯೋಚಿಸಿ. ಏಕೆಂದರೆ ಈ ಸಮಯದಲ್ಲಿ ವ್ಯವಹಾರದಲ್ಲಿ ಏರಿಳಿತಗಳು ಕಂಡುಬರುವ ಸಾಧ್ಯತೆ ಇದೆ. ವಿಸ್ತರಣೆ ಮಾಡುವ ಕಾರ್ಯಗಳನ್ನು ಮುಂದೂಡುವುದು ಒಳಿತು. ಉದ್ಯೋಗ ಬದಲಾವಣೆಯ ವಿಚಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಡಿ; ಬದಲಿಗೆ ನಂಬಿಗಸ್ತರ, ಹಿತೈಷಿಗಳ ಸಲಹೆ ಪಡೆಯಿರಿ. ಕೆಲಸ ಸಂಬಂಧಿತ ಪ್ರಯಾಣ ಮಾಡುವ ಅಗತ್ಯ ಬಂದು ಒತ್ತಡ ಹೆಚ್ಚುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಕೆಲಸದ ಒತ್ತಡ ಹೆಚ್ಚಾಗುವುದರಿಂದ ನಿಮ್ಮ ಹೆಚ್ಚುವರಿ ಹೊತ್ತು ಕೆಲಸಕ್ಕಾಗಿ ಮೀಸಲಿಡಬೇಕಾಗಬಹುದು. ವೃತ್ತಿ ಅಥವಾ ವ್ಯಾಪಾರದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಆಲೋಚನೆ-ಮಂಥನ ಮಾಡಿ, ತುರ್ತು ನಿರ್ಧಾರಗಳು ಸಂಕಷ್ಟ ತರಬಹುದು. ಈ ತಿಂಗಳು ನಿಮಗೆ ಆತ್ಮ ನಿಯಂತ್ರಣದ ಪರೀಕ್ಷೆಯಾಗಲಿದೆ. ತಮ್ಮ ಆಸೆ-ಆಕಾಂಕ್ಷೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಮುಖ್ಯ. ವಿರೋಧಿಗಳು ಕಾರ್ಯೋನ್ಮುಕ್ತರಾಗಿ ನಿಮಗೆ ಆಡ್ಡಿ ಮಾಡಲು ಪ್ರಯತ್ನಿಸುತ್ತಾರೆ. ನಿಮ್ಮ ಯೋಜನೆಗಳನ್ನು ರಹಸ್ಯವಾಗಿಟ್ಟುಕೊಳ್ಳಿ.
ದ್ವಿತೀಯ ವಾರದಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ, ಇದಕ್ಕಾಗಿ ಸಾಲದ ಅವಶ್ಯಕತೆ ತಲೆದೋರಬಹುದು. ಆರೋಗ್ಯವನ್ನು ನಿರ್ಲಕ್ಷಿಸದೆ ತಕ್ಷಣದ ಚಿಕಿತ್ಸೆ ಪಡೆಯುವುದು ಒಳಿತು. ತಿಂಗಳ ಕೊನೆಯ ಭಾಗವು ವ್ಯಾಪಾರಕ್ಕೆ ಲಾಭದಾಯಕವಾಗಲಿದೆ. ದಾಂಪತ್ಯ ಜೀವನ ಸಾಮಾನ್ಯವಾಗಿದ್ದರೂ ಸಣ್ಣಪುಟ್ಟ ಅಸಮಾಧಾನಗಳು ಇರಬಹುದು. ಆಹಾರ ಪದ್ಧತಿಗೆ ಗಮನ ಕೊಡಿ, ಇಲ್ಲವಾದರೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಕಾಡಬಹುದು. ಪ್ರೀತಿಜೀವನದಲ್ಲಿ ಉದ್ವಿಗ್ನತೆ ಹೆಚ್ಚಬಹುದು, ಕುಟುಂಬದಲ್ಲಿ ಕಲಹದ ವಾತಾವರಣ ಉಂಟಾಗಬಹುದು.
ತುಲಾ ರಾಶಿ
ಸೆಪ್ಟೆಂಬರ್ ತಿಂಗಳು ತುಲಾ ರಾಶಿಯವರಿಗೆ ಹರ್ಷವನ್ನು ತರುತ್ತದೆ. ಜೊತೆಗೆ ಅದೃಷ್ಟ ಬರಲಿದೆ. ಬಹುಕಾಲದಿಂದ ಮುಂದೂಡಲ್ಪಟ್ಟ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳುತ್ತವೆ. ನ್ಯಾಯಾಲಯ ಸಂಬಂಧಿತ ವಿಚಾರಗಳಲ್ಲಿ ಸಹ ಅನುಕೂಲಕರ ತೀರ್ಪುಗಳು ಬರಬಹುದು. ತಿಂಗಳ ಆರಂಭದಲ್ಲೇ ಮಹತ್ವದ ಸಾಧನೆಗಳು ನಿಮ್ಮ ಪಾಲಾಗುತ್ತವೆ, ಇದರಿಂದ ಮಾನ್ಯತೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ದ್ವಿತೀಯ ವಾರದಲ್ಲಿ ಕೆಲಸದಲ್ಲಿ ಸ್ವಲ್ಪ ತೊಂದರೆಗಳಿದ್ದರೂ ಅಂತಿಮವಾಗಿ ಯಶಸ್ಸು ಖಚಿತ. ವ್ಯಾಪಾರದಲ್ಲಿ ಸ್ಥಿರವಾದ ಬೆಳವಣಿಗೆ ಜೊತೆಗೆ, ನಿಮ್ಮ ಪ್ರಭಾವ ಮತ್ತಷ್ಟು ಬಲವಾಗುತ್ತದೆ.
ಹಣಕಾಸಿನಲ್ಲಿ ಉಳಿತಾಯ ಹೆಚ್ಚುತ್ತದೆ ಹಾಗೂ ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹೊಸ ಸ್ಥಾನಮಾನ ಮತ್ತು ಕೀರ್ತಿ ಸಿಗುತ್ತದೆ. ಪ್ರೀತಿಜೀವನಕ್ಕೆ ಇದು ಅನುಕೂಲಕರ ಸಮಯವಾಗಿದ್ದು, ನಿಮ್ಮ ಪ್ರೇಮ ಪ್ರಸ್ತಾಪ ಸ್ವೀಕಾರವಾಗುವ ಸಾಧ್ಯತೆ ಇದೆ. ಮನೆ, ವಾಹನ ಮುಂತಾದ ಸೌಕರ್ಯಗಳ ಖರೀದಿಗೆ ವೆಚ್ಚವಾಗುವ ಸಾಧ್ಯತೆ ಇದೆ. ಹಳೆಯ ಸಂಬಂಧಗಳಿಗೆ ಕುಟುಂಬದಿಂದ ಬೆಂಬಲ ದೊರೆಯಬಹುದು. ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಚೆನ್ನಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ ಮತ್ತು ಅದನ್ನು ವಿಸ್ತರಿಸುವ ಕನಸು ನೆರವೇರಬಹುದು. ಕುಟುಂಬ ಹಾಗೂ ಸ್ನೇಹಿತರ ಸಂಪೂರ್ಣ ಬೆಂಬಲ ನಿಮ್ಮೊಂದಿಗೇ ಇರುತ್ತದೆ. ತಿಂಗಳ ಆರಂಭದಲ್ಲೇ ಬಹುಕಾಲದಿಂದ ಬಾಕಿ ಉಳಿದ ಕೆಲಸಗಳು ಮುಗಿದು ಸರ್ಕಾರ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಬಹುದು. ದ್ವಿತೀಯ ವಾರದಲ್ಲಿ ಕೆಲ ಅಡೆತಡೆಗಳು ಎದುರಾಗಬಹುದು, ಆದರೆ ಜಾಗರೂಕತೆಯಿಂದ ನಡೆದುಕೊಂಡರೆ ನಷ್ಟ ತಪ್ಪಿಸಿಕೊಳ್ಳಬಹುದು.
ತಿಂಗಳ ಮಧ್ಯಭಾಗವು ವ್ಯಾಪಾರ ಮತ್ತು ಮಾರುಕಟ್ಟೆ ಕ್ಷೇತ್ರದವರಿಗಾಗಿ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ದೊಡ್ಡ ಲಾಭಗಳ ಅವಕಾಶಗಳಿವೆ. ದಾಂಪತ್ಯ ಜೀವನ ಸುಖಕರವಾಗಿದ್ದು, ಆರೋಗ್ಯ ಸಹ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುತ್ತವೆ, ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ನಿಮ್ಮ ಚಾತುರ್ಯ ಮತ್ತು ವಿವೇಚನೆ ಸಂಪತ್ತು ಹಾಗೂ ಕೀರ್ತಿಯನ್ನು ಹೆಚ್ಚಿಸಲಿದೆ. ಪ್ರೀತಿಜೀವನದಲ್ಲಿ ಬಾಂಧವ್ಯ ಬಲವಾಗುತ್ತದೆ. ಸಂಗಾತಿಯಿಂದ ಆನಂದದ ಸುದ್ದಿ ಅಥವಾ ವಿಶೇಷ ಉಡುಗೊರೆ ಸಿಗಬಹುದು.
ಧನು ರಾಶಿ
ಸೆಪ್ಟೆಂಬರ್ ತಿಂಗಳು ಧನು ರಾಶಿಯವರಿಗೆ ಹಲವಾರು ಒಳ್ಳೆಯ ಫಲಿತಾಂಶಗಳನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆಯ ಜೊತೆಗೆ, ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವೂ ದೊರಕಬಹುದು, ಇದು ಭವಿಷ್ಯದಲ್ಲಿ ಹೊಸ ಮಾರ್ಗಗಳನ್ನು ತೆರೆದು ಕೊಡಲಿದೆ.ವೃತ್ತಿಜೀವನ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಸಾಧನೆಗಳನ್ನು ಗುರುತಿಸಲಾಗುತ್ತದೆ, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು.
ಆದರೆ, ತಿಂಗಳ ಎರಡನೇ ವಾರದಲ್ಲಿ ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಹಣಕಾಸು ವ್ಯವಹಾರಗಳಲ್ಲಿ ವಿಶೇಷ ಜಾಗ್ರತೆ ವಹಿಸಬೇಕು. ಹೆಚ್ಚು ನಂಬಿಕೆ ಇಡುವುದರಿಂದ ನಷ್ಟವಾಗುವ ಸಾಧ್ಯತೆ ಇದೆ. ವಿರೋಧಿಗಳ ಚಟುವಟಿಕೆಗಳಿಂದ ಎಚ್ಚರಿಕೆಯಿಂದ ಇರಬೇಕು. ಸ್ಪರ್ಧಾತ್ಮಕ ಪರಿಸ್ಥಿತಿಗಳೂ ಎದುರಾಗಬಹುದು, ಆದರೆ ನೀವು ಶಾಂತವಾಗಿ ನಿರ್ವಹಿಸಿದರೆ ಅವು ನಿಮಗೆ ಹಾನಿ ಮಾಡುವುದಿಲ್ಲ.
ಮಧ್ಯಭಾಗಕ್ಕೆ ಬರುವಂತೆ ಪರಿಸ್ಥಿತಿಗಳು ನಿಮ್ಮ ಪರವಾಗಿ ತಿರುಗಲಿವೆ. ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ದೊರಕುವ ಸಾಧ್ಯತೆ ಜಾಸ್ತಿ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದರಿಂದ ಮಾನಸಿಕ ಶಾಂತಿ ಲಭಿಸುತ್ತದೆ. ವ್ಯವಹಾರದಲ್ಲಿ ಲಾಭದಾಯಕ ಅವಕಾಶಗಳು ಲಭ್ಯವಾಗುತ್ತವೆ.
ತಿಂಗಳ ಕೊನೆಯ ಭಾಗದಲ್ಲಿ ವಾಹನ ಚಲಾಯಿಸುವಾಗ ಹಾಗೂ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಿ. ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆ ಹೆಚ್ಚುವ ಮೂಲಕ ಸಂಬಂಧಗಳು ಇನ್ನಷ್ಟು ಗಾಢವಾಗುತ್ತವೆ. ಪ್ರೇಮ ಜೀವನದಲ್ಲಿ ಸುಂದರ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ;
ಮಕರ ರಾಶಿ
ಮಕರರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಹಣಕಾಸಿನ ದೃಷ್ಟಿಯಿಂದ, ಅನಿರೀಕ್ಷಿತ ವೆಚ್ಚಗಳು ಬಜೆಟ್ ಮೇಲೆ ಒತ್ತಡ ಮೂಡಿಸಬಹುದು, ಆದ್ದರಿಂದ ಖರ್ಚನ್ನು ಯೋಚಿಸಿ ಮಾಡುವುದು ಉತ್ತಮ. ತಿಂಗಳ ಆರಂಭದಲ್ಲಿ ಮನೆಯ ಸಮಸ್ಯೆಗಳು ಅಥವಾ ಕೆಲಸದ ಸ್ಥಳದಲ್ಲಿ ಬದಲಾವಣೆಗಳು ನಿಮ್ಮ ಶ್ರಮವನ್ನು ಹೆಚ್ಚಿಸಬಹುದು. ಸ್ನೇಹಿತರ ಬೆಂಬಲದಿಂದ ಈ ಸವಾಲುಗಳನ್ನು ನೀವು ಸುಲಭವಾಗಿ ಸಮಾಧಾನಗೊಳಿಸಬಹುದು.
ಎರಡನೇ ವಾರದಲ್ಲಿ ದೀರ್ಘ ಪ್ರಯಾಣದ ಅವಕಾಶಗಳು ಬರುವಂತೆ ಕಾಣುತ್ತದೆ, ಇದು ವೃತ್ತಿಜೀವನಕ್ಕೆ ಲಾಭದಾಯಕವಾಗಲಿದೆ. ಭೂಮಿ, ಕಟ್ಟಡ ಅಥವಾ ಸಂಬಂಧಿತ ವಿವಾದಗಳು ಸರಿಯಾಗಬಹುದು.
ತಿಂಗಳ ಮಧ್ಯಭಾಗದಲ್ಲಿ ಆರೋಗ್ಯ ಮತ್ತು ಸಂಬಂಧಗಳಿಗೆ ವಿಶೇಷ ಗಮನ ನೀಡುವುದು ಅಗತ್ಯ. ಕೋಪದಿಂದ ನಿರ್ಧಾರ ತೆಗೆದುಕೊಳ್ಳದಿರಿ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರಿಸ್ಥಿತಿಗಳು ಎದುರಾಗಬಹುದು, ಆದರೂ ಬುದ್ಧಿವಂತಿಕೆಯಿಂದ ಯೋಜನೆ ಮತ್ತು ಹೂಡಿಕೆ ಮಾಡಿದರೆ ಲಾಭವಾಗುತ್ತದೆ.
ತಿಂಗಳ ದ್ವಿತೀಯಾರ್ಧದಲ್ಲಿ, ಪ್ರೇಮ ಸಂಬಂಧಗಳಲ್ಲಿ ಕೆಲ ತಪ್ಪು ತಿಳುವಳಿಕೆ ಕಾಣಬಹುದು, ಆದರೆ ಸಂಭಾಷಣೆ ಮತ್ತು ಸ್ನೇಹಿತರ ಸಲಹೆಯಿಂದ ಸಂಬಂಧ ಪುನಃ ಸಮಾಧಾನಕರವಾಗಿ ನಿಂತುಕೊಳ್ಳುತ್ತದೆ. ಹೊಸ ಉದ್ಯೋಗ ಅಥವಾ ಜೀವನೋಪಾಯದ ಅವಕಾಶಗಳು ಪ್ರಕಟವಾಗುತ್ತವೆ. ಮನೆಯ ಸೌಲಭ್ಯಗಳು ಮತ್ತು ಆರಾಮದಾಯಕ ಪರಿಸರ ಹೆಚ್ಚಾಗಲಿದೆ.
ಕುಂಭ ರಾಶಿ
ಸೆಪ್ಟೆಂಬರ್ ತಿಂಗಳು ಕುಂಭ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ತಿಂಗಳ ಆರಂಭದಲ್ಲಿ, ಆರೋಗ್ಯ ಮತ್ತು ವೈಯಕ್ತಿಕ ಸಂಬಂಧಗಳ ಮೇಲೂ ಗಮನ ನೀಡಬೇಕು, ಏಕೆಂದರೆ ಅಸಭ್ಯ ವರ್ತನೆ ನಿಮ್ಮ ಪ್ರೀತಿಪಾತ್ರರೊಂದಿಗೆ ಅಸಮಾಧಾನ ಉಂಟುಮಾಡಬಹುದು. ಕೆಲಸದ ಸ್ಥಳದಲ್ಲಿ ಹಿರಿಯರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಸಮ್ಮಿಲನ ಮತ್ತು ಉತ್ತಮ ಸಂವಹನವನ್ನು ಕಾಯ್ದುಕೊಳ್ಳುವುದು ಅಗತ್ಯ.
ಎರಡನೇ ವಾರದಲ್ಲಿ ಕೆಲಸದ ಹೊಣೆಗಾರಿಕೆ ಹೆಚ್ಚಾಗಿ, ದೀರ್ಘ ಪ್ರಯಾಣದ ಅಗತ್ಯವೂ ಬರುವಂತೆ ಕಾಣುತ್ತದೆ. ಹೂಡಿಕೆ ಅಥವಾ ಯೋಜನೆಗಳನ್ನು ತುರ್ತು ನಿರ್ಧಾರವನ್ನಾಗಿ ಮಾಡಬೇಡಿ; ಎಲ್ಲವನ್ನೂ ಪರಾಮರ್ಶಿಸಿ, ನಂಬಿಗಸ್ತರ ಸಲಹೆ ಪಡೆಯುವುದು ಉತ್ತಮ.
ತಿಂಗಳ ಮಧ್ಯದಲ್ಲಿ ಅಕಸ್ಮಾತ್ ಯಶಸ್ಸಿನ ಅವಕಾಶಗಳು ಎದುರಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಂತೋಷದ ಸುದ್ದಿ ಸಿಗಲಿದೆ. ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನ ಅಥವಾ ಹೆಚ್ಚುವರಿ ಜವಾಬ್ದಾರಿಗಳು ನಿಮ್ಮನ್ನು ಎದುರಾಗಬಹುದು. ವ್ಯಾಪಾರ, ಆಸ್ತಿ ಹಾಗೂ ಹಣಕಾಸಿನ ವಿಚಾರಗಳಲ್ಲಿ ಲಾಭದಾಯಕ ಫಲಿತಾಂಶಗಳು ಕಾಣಿಸುತ್ತವೆ.
ತಿಂಗಳ ದ್ವಿತೀಯಾರ್ಧದಲ್ಲಿ, ಪ್ರೇಮ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಗಳು ನಿವಾರಣೆಯಾಗುತ್ತವೆ ಮತ್ತು ಸಂಬಂಧಗಳು ಬಲಗೊಳ್ಳುತ್ತವೆ. ವೈವಾಹಿಕ ಜೀವನವು ಸಂತೋಷಕರ, ಸಮರ್ಥಕರ ಮತ್ತು ಬೆಂಬಲದಾಯಕವಾಗಿರುತ್ತದೆ. ಜೀವನ ಸಂಬಂಧಿ ದೊಡ್ಡ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ತಂದೆಯ ಬೆಂಬಲವೂ ಲಭಿಸುತ್ತದೆ.
ಮೀನ ರಾಶಿ
ಮೀನ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಸಾಮಾನ್ಯ ಮಿಶ್ರಿತ ಫಲಿತಾಂಶಗಳನ್ನು ನೀಡಲಿದೆ. ತಿಂಗಳ ಆರಂಭದಲ್ಲಿ ಭೂಮಿ ಅಥವಾ ಕಟ್ಟಡ ಸಂಬಂಧಿತ ವಿವಾದಗಳು ನಿಮ್ಮ ತಲೆನೋವಿಗೆ ಕಾರಣವಾಗಬಹುದು ಮತ್ತು ಅಗತ್ಯವಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಹೆಚ್ಚುವರಿ ಶ್ರಮ ಬೇಕಾಗುತ್ತದೆ. ವೃತ್ತಿ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು, ಆದರೆ ಪ್ರೀತಿಪಾತ್ರರ ಬೆಂಬಲ ಮತ್ತು ಹಿರಿಯರ, ಸಹೋದ್ಯೋಗಿಗಳ ಸಹಾಯದಿಂದ ನೀವು ಸವಾಲುಗಳನ್ನು ಸುಲಭವಾಗಿ ನಿಭಾಯಿಸಬಹುದು.
ಎರಡನೇ ವಾರದಲ್ಲಿ ವ್ಯವಹಾರ ಕ್ಷೇತ್ರದಲ್ಲಿ ಲಾಭದಾಯಕ ಫಲಿತಾಂಶಗಳು ನಿರೀಕ್ಷಿಸಬಹುದು. ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಮತ್ತು ಉದ್ಯೋಗದಲ್ಲಿರುವವರು ಹೆಚ್ಚುವರಿ ಆದಾಯದ ಅವಕಾಶಗಳನ್ನು ಪಡೆಯುತ್ತಾರೆ.
ತಿಂಗಳ ಮಧ್ಯಭಾಗದಲ್ಲಿ ಮನೆಯಲ್ಲಿನ ವಿವಾದಗಳು ನಿಮ್ಮ ಮನಸ್ಸಿಗೆ ಒತ್ತಡ ನೀಡಬಹುದು, ಆದ್ದರಿಂದ ಶಾಂತ ಮನಸ್ಸಿನಿಂದ ತಾಳ್ಮೆಯಿಂದ ನಿರ್ವಹಿಸುವುದು ಅಗತ್ಯ. ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡಬಾರದು; ಆಹಾರ ಮತ್ತು ಜೀವನಶೈಲಿಯ ಮೇಲೆ ಗಮನಹರಿಸಬೇಕು.
ತಿಂಗಳ ದ್ವಿತೀಯಾರ್ಧದಲ್ಲಿ ಮಾನಸಿಕ ಮತ್ತು ದೈಹಿಕ ಆಯಾಸ ಹೆಚ್ಚಾಗಬಹುದು. ಪ್ರೇಮ ಜೀವನದಲ್ಲಿ ತಪ್ಪು ತಿಳುವಳಿಕೆಗಳನ್ನು ನಿವಾರಿಸಲು ನೀವು ಸರಿಯಾಗಿ ಮಾತನಾಡಿ ಬಗೆಹರಿಸಿಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಕೆಲಸದ ನಡುವೆ, ಸಂಗಾತಿಗೆ ಸಮಯ ಮೀಸಲಿಡುವುದು ಮುಖ್ಯ.
ಇದನ್ನೂ ಓದಿ:
ಜ್ಯೋತಿಷ್ಯ ಮತ್ತು ವೃತ್ತಿ ಯಶಸ್ಸು: ನಿಮ್ಮ ರಾಶಿಗೆ ತಕ್ಕ ಉತ್ತಮ ಉದ್ಯೋಗಗಳು