ಹೆಚ್ಚು ಮಂದಿ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ, ಆದರೆ ಕೆಲವರು ಮಾತ್ರ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳದೆ ಎಷ್ಟೇ ಕಷ್ಟ ಬಂದರೂ ಸಹ ಹೋರಾಡುವ ಮನೋಭಾವನೆಯನ್ನು ಹೊಂದಿರುತ್ತಾರೆ. ರಿಷಭ್ ಶೆಟ್ಟಿ ಅವರೂ ಸಹ ಅವರಲ್ಲೊಬ್ಬರು ಅಂತಲೇ ಹೇಳಬಹುದು. ಆರಂಭಿಕ ದಿನಗಳಲ್ಲಿ, ಅವರು ಪಾತ್ರೆಗಳು ತೊಳೆಯುವಂತಹ ಸಣ್ಣ ಕೆಲಸಗಳು ಹಾಗೂ ಕೆಲಸದಲ್ಲಿ ಇತರರಿಗೆ ಸಹಾಯ ಮಾಡುವಂತಹ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ತಮ್ಮ ಕನಸುಗಳನ್ನು ಎಂದಿಗೂ ಬಿಡದೇ, ತಮ್ಮ ಕೆಲಸದ ಮೂಲಕವೇ ಖ್ಯಾತಿ ಗಳಿಸಿದರು. ಎಷ್ಟೇ ಕಷ್ಟಗಳು ಇದ್ದರೂ ಸಹ, ಅವರ ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮ ಕ್ರಮೇಣ ಅವರಿಗೆ ಹೆಸರು ಮತ್ತು ಯಶಸ್ಸನ್ನು ತಂದಿತು.
ಕನ್ನಡ ಚಿತ್ರರಂಗದಲ್ಲಿ ಖ್ಯಾತಿ
ಚಿತ್ರರಂಗದಲ್ಲಿ ಯಶಸ್ಸು ಕೇವಲ ಪ್ರತಿಭೆಯ ವಿಷಯವಲ್ಲ – ಅದು ಸಹನೆ, ಪರಿಶ್ರಮ ಮತ್ತು ಕಾರ್ಯದಲ್ಲಿ ಕಲಿಕೆಯ ಮೇಲೂ ಅವಲಂಬಿತವಾಗಿದೆ. ರಿಷಭ್ ಶೆಟ್ಟಿ ಆಫೀಸ್ ಬಾಯ್ ಮತ್ತು ನಿರ್ಮಾಪಕರ ಡ್ರೈವರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು, ಆದರೆ ಅವರು ಕಲಿಯಲು, ತಮ್ಮ ಕೌಶಲ್ಯಗಳನ್ನು ಸುಧಾರಿಸಲು ತಮ್ಮ ಮುಂದೆ ಬಂದ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಮುಂದುವರಿದರು. ಅವರ ಪಯಣವು ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ಕೆಲಸ ಮಾಡುತ್ತಿರುವ ಯಾರಿಗಾದರೂ ಪ್ರೇರಣೆಯಾಗುವಂತಹುದು.
ಕಾಂತಾರ ಮೂಲಕ ರಾಷ್ಟ್ರೀಯ ಪ್ರಶಸ್ತಿ ವಿಜೇತ
ರಿಷಭ್ ಶೆಟ್ಟಿಯವರ ಖ್ಯಾತಿ 2022 ರ ಬ್ಲಾಕ್‌ಬಸ್ಟರ್ ಸಿನಿಮಾ "ಕಾಂತಾರ" ಮೂಲಕ ಬೆಳೆಯಿತು, ಇದು ಅವರನ್ನು ಸೂಪರ್ ಸ್ಟಾರ್ ಆಗಿ ಜನರು ಗುರುತಿಸುವಂತೆ ಮಾಡಿತು. ಅವರ ಅದ್ಭುತ ಅಭಿನಯ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿತು ಮತ್ತು ಭಾರತೀಯ ಸಿನೆಮಾದಲ್ಲಿ ಅವರ ಸ್ಥಾನವನ್ನು ದೃಢಗೊಳಿಸಿತು. "ಕಾಂತಾರ" ಚಿತ್ರದ ನಂತರ, ಪೂರ್ವಕಥೆಯಾದ "ಕಾಂತಾರ: ಚಾಪ್ಟರ್ 1" ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿ, ನಟ ಮತ್ತು ನಿರ್ದೇಶಕರಾಗಿ ಅವರ ಪ್ರತಿಭೆಯನ್ನು ಮತ್ತೊಮ್ಮೆ ಜಗತ್ತು ತನ್ನ ಬೆರಗು ಕಣ್ಣುಗಳಿಂದ ಗಮನಿಸುವಂತೆ ಮಾಡಿತು.
ನಿರ್ದೇಶಕರಾಗಿ ಪಯಣ ಮತ್ತು ಪ್ರಮುಖ ಹಿಟ್‌ಗಳು
ರಿಷಭ್ ಶೆಟ್ಟಿ "ರಿಕ್ಕಿ" ಮೂಲಕ ನಿರ್ದೇಶಕ ಆಗಿ ಪಯಣ ಆರಂಭಿಸಿದರು ಮತ್ತು ನಂತರ "ಕಿರಿಕ್ ಪಾರ್ಟಿ" ಸೇರಿದಂತೆ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದರು. ಅವರು ಫಿಲ್ಮ್‌ಫೇರ್ ಮತ್ತು ಸೈಮಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರ ಜೊತೆಗೆ ಅವರು "ತುಘಲಕ್", "ಉಳಿದವರು ಕಂಡಂತೆ", "ಬೆಲ್ ಬಾಟಮ್", "ಗರುಡ ಗಮನ ವೃಷಭ ವಾಹನ", ಮತ್ತು "ಕಾಂತಾರ" ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಸಮರ್ಪಣೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗೌರವ ಮತ್ತು ಖ್ಯಾತಿಯನ್ನು ಗಳಿಸಿದೆ ಮತ್ತು ಅವರು ಇಂದಿನ ದಿನದ ಅತ್ಯಂತ ಜನ ಮೆಚ್ಚಿದ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ.
ರಿಷಭ್ ಶೆಟ್ಟಿಯ ಸಂಪತ್ತು ಮತ್ತು ಜೀವನಶೈಲಿ
ಯಶಸ್ಸು ದೊರಕಿದ ನಂತರ, ರಿಷಭ್ ಶೆಟ್ಟಿ ಆರ್ಥಿಕ ಸ್ಥಿರತೆಯನ್ನು ಸಾಧಿಸಿದ್ದಾರೆ. ಅವರ ಹತ್ತಿರ ಆಡಿ Q7, ಜೀಪ್ ಕಾಂಪಾಸ್, ಮಹೀಂದ್ರಾ ಥಾರ್ ಮುಂತಾದ ಲಕ್ಸುರಿ ವಾಹನಗಳಿವೆ. ಅವರ ಆದಾಯ ನಟನೆ, ನಿರ್ದೇಶನ ಮತ್ತು ನಿರ್ಮಾಣ ವ್ಯವಹಾರಗಳಿಂದ ಬರುತ್ತದೆ. Mashable India ಪ್ರಕಾರ, 2025 ರಲ್ಲಿ ಅವರ ಸಂಪತ್ತು ₹15 ಕೋಟಿ ರಿಂದ ₹18 ಕೋಟಿ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಅವರ ಕಥೆ ಧೈರ್ಯ, ಪರಿಶ್ರಮ ಮತ್ತು ಸರಿಯಾದ ಅವಕಾಶಗಳು ಅದ್ಭುತ ಯಶಸ್ಸಿಗೆ ದಾರಿ ತೋರಿಸಬಲ್ಲವು ಎಂದು ಸಾಬೀತು ಮಾಡುತ್ತದೆ.
ದೃಢ ನಿಶ್ಚಯದಿಂದ ಹುಟ್ಟಿದ ಸ್ಟಾರ್
ಹೆಚ್ಚು ಕಷ್ಟಗಳನ್ನು ಅನುಭವಿಸಿದ್ದರೂ ಸಹ ಛಲ ಬಿಡದೇ ರಾಷ್ಟ್ರೀಯ ಖ್ಯಾತಿಗೆ ತಲುಪಿದ ರಿಷಭ್ ಶೆಟ್ಟಿಯವರ ಪಯಣ ಪ್ರೇರಣಾದಾಯಕವಾಗಿದೆ. ಅವರು ಕೇವಲ ನಟನಾಗಿ ಮಾತ್ರ ಅಲ್ಲ, ನಿರ್ದೇಶಕರಾಗಿ ಸಹ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮುಂದಿನ ಯೋಜನೆಗಳೊಂದಿಗೆ, ಅವರು ತಮ್ಮ ಪಾರಂಪರ್ಯವನ್ನು ವಿಸ್ತರಿಸಲು ಮತ್ತು ಭಾರತೀಯ ಸಿನೆಮಾದಲ್ಲಿ ತಮ್ಮ ಪ್ರಭಾವವನ್ನು ಮುಂದುವರೆಸಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ:
ಕತ್ರಿನಾ ಕೈಫ್ ನೆಟ್ ವರ್ತ್: ಬ್ಲಾಕ್‌ಬಸ್ಟರ್ ಸಿನಿಮಾಗಳಿಂದ ₹240 ಕೋಟಿ ಸಾಮ್ರಾಜ್ಯವರೆಗೆ
ಹಕ್ಕು ನಿರಾಕರಣೆ/Disclaimer: ರಿಷಭ್ ಶೆಟ್ಟಿ ಅವರ ಜೀವನ ಚರಿತ್ರೆ, ಆದಾಯ, ನಿವ್ವಳ ಮೌಲ್ಯ ಮತ್ತು ಜೀವನಶೈಲಿಯ ಕುರಿತು ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯನ್ನು ವಿವಿಧ ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಲಾಗಿದೆ ಮತ್ತು ಜ್ಞಾನ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ. ನಿಜವಾದ ಅಂಕಿಅಂಶಗಳು ಕಾಲದಿಂದ ಕಾಲಕ್ಕೆ ಬದಲಾಗಬಹುದು.