Motorola Moto G86: ಪ್ರೀಮಿಯಂ ಮೊಬೈಲ್ ಅನುಭವ ಈಗ ಕಡಿಮೆ ಬೆಲೆಗೆ!

By ಸುಖೇಶ್ ಶಾನಭಾಗ್ Updated: Tuesday, August 26, 2025, 14:59 [IST]

Motorola Moto G86: ಪ್ರೀಮಿಯಂ ಮೊಬೈಲ್ ಅನುಭವ ಈಗ ಕಡಿಮೆ ಬೆಲೆಗೆ!

Motorola Moto G86  (ಮೊಟೊರೊಲಾ ಮೋಟೋ): ಕಡಿಮೆ ಬೆಲೆ ಮತ್ತು ಅತ್ಯದ್ಭುತವಾದ ವೈಶಿಷ್ಟ್ಯಗಳು!

ಮೋಟೋರೋಲಾ ತನ್ನ ಹೊಸ ಸ್ಮಾರ್ಟ್‌ಫೋನ್ Moto G86 ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ ಡಿಸೈನ್, ಶಕ್ತಿಶಾಲಿ ಪರ್ಫಾರ್ಮೆನ್ಸ್ ಮತ್ತು ಅಡ್ವಾನ್ಸ್ಡ್ ಫೀಚರ್‌ಗಳ ಸಂಯೋಜನೆಯಲ್ಲಿ ಈ ಫೋನ್ ನಿಮ್ಮ ಬಜೆಟಿಗೆ ಅನುಕೂಲಕರವಾದ ಬೆಲೆಯಲ್ಲಿ ಲಭ್ಯವಿದೆ. ಪ್ರೀಮಿಯಂ ಅನುಭವವನ್ನು ಕಡಿಮೆ ದರದಲ್ಲಿ ನೀಡುವ ಈ ಫೋನ್, ಮಿಡ್-ರೇಂಜ್ ಮೊಬೈಲ್ ಸೆಗ್ಮೆಂಟ್‌ನಲ್ಲಿ ಬಲವಾದ ಸ್ಪರ್ಧಿಯಾಗಿದೆ.

ಡಿಸ್ಪ್ಲೇ ಮತ್ತು ಡಿಸೈನ್

Moto G86 ನಲ್ಲಿ 6.67 ಇಂಚಿನ P-OLED ಡಿಸ್ಪ್ಲೇ ನೀಡಲಾಗಿದೆ. 1220 x 2712 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಈ ಫೋನ್ ನೀವು ವೀಡಿಯೊ ವೀಕ್ಷಣೆ ಮಾಡುವಾಗ ಅಥವಾ ಆಪ್‌ಗಳಲ್ಲಿ ಬ್ರೌಸ್ ಮಾಡುವಾಗ ಕಣ್ಣಿಗೆ ತಂಪೆರೆಯುವಂತಹ ಅದ್ಭುತವಾದ ಬಣ್ಣಗಳಲ್ಲಿ ದೃಶ್ಯಗಳನ್ನು ತೋರಿಸುತ್ತದೆ. ಹೆಚ್ಚಿನ ಬಾಳಿಕೆಗಾಗಿ, ಈ ಫೋನ್‌ನ ಮುಂಭಾಗದ ಗಾಜು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ ತಯಾರಿಸಲಾಗಿದೆ, ಇದು ಸ್ಕ್ರಾಚ್‌ಗಳು ಮತ್ತು ಸಣ್ಣ ಡ್ಯಾಮೇಜ್ ಗಳಿಂದ ಮೊಬೈಲ್ ಅನ್ನು ಕಾಪಾಡುತ್ತದೆ.

Moto G86 at Just ₹19,990

ಪರ್ಫಾರ್ಮೆನ್ಸ್ ಮತ್ತು ಸಾಫ್ಟ್ ವೆರ್ 

ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಮತ್ತು ಆಕ್ಟಾ-ಕೋರ್ CPU ಶಕ್ತಿಯನ್ನು ನೀಡುತ್ತವೆ. ಇದರಿಂದ ಮಲ್ಟಿಟಾಸ್ಕಿಂಗ್ ಸುಗಮವಾಗಿದ್ದು, ಉತ್ತಮ ಪವರ್ ಮ್ಯಾನೇಜ್ಮೆಂಟ್ ಮತ್ತು ವೇಗದ ಯೂಸರ್ ಎಕ್ಸ್‌ಪೀರಿಯನ್ಸ್ ದೊರೆಯುತ್ತದೆ.

ವೆರಿಯಂಟ್ಸ್, ಬಣ್ಣಗಳು ಮತ್ತು ಬೆಲೆ

Moto G86 ಮೂರು ಸ್ಟೋರೇಜ್ ಮತ್ತು RAM  ವೇರಿಯಂಟ್ಸ್‌ನಲ್ಲಿ ಲಭ್ಯವಿದೆ. 8GB RAM ಹಾಗೂ 256GB ಮೆಮೊರಿ ಸ್ಟೋರೇಜ್, 12GB RAM ಮತ್ತು 256GB ಮೆಮೊರಿ ಸ್ಟೋರೇಜ್ ಮತ್ತು 12GB RAM ಜೊತೆಗೆ 512GB  ಮೆಮೊರಿ ಸ್ಟೋರೇಜ್ ಆಯ್ಕೆಗಳಲ್ಲಿ ಇದು ದೊರಕುತ್ತದೆ. ಬಳಕೆದಾರರು ತಮ್ಮ ಅಗತ್ಯಗಳಿಗೆ ತಕ್ಕಂತೆ ಯಾವುದೇ ವೆರಿಯಂಟ್ ಅನ್ನು ಆಯ್ಕೆ ಮಾಡಬಹುದು. ಬಣ್ಣಗಳ ವಿಚಾರದಲ್ಲಿ, ಈ ಫೋನ್ ಪ್ಯಾಂಟೋನ್ ಸ್ಪೆಲ್ಬೌಂಡ್, ಗೋಲ್ಡನ್ ಸೈಪ್ರೆಸ್, ಕಾಸ್ಮಿಕ್ ಸ್ಕೈ ಮತ್ತು ಕ್ರೈಸಾಂಥೆಮಮ್ ಎಂಬ ನಾಲ್ಕು ಆಕರ್ಷಕ ಶೇಡ್‌ಗಳಲ್ಲಿ ಲಭ್ಯವಿದ್ದು, ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ತಕ್ಕಂತೆ ಬಣ್ಣಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಭಾರತದಲ್ಲಿ Moto G86 ಆರಂಭಿಕ ಬೆಲೆ ₹19,990 ಆಗಿದ್ದು, ಇದು ಪ್ರೀಮಿಯಂ ಫೀಚರ್‌ಗಳನ್ನು ಕಡಿಮೆ ಬೆಲೆಗೆ ಹುಡುಕುತ್ತಿರುವವರಿಗೆ ಆಕರ್ಷಕ ಆಯ್ಕೆಯಾಗಿದೆ.

Moto G86 Big Battery, 50MP Camera, Affordable Price

ಕ್ಯಾಮೆರಾ ವೈಶಿಷ್ಟ್ಯಗಳು

ಫೋಟೋಗ್ರಫಿ ಪ್ರಿಯರಿಗಾಗಿ, ಈ ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಒದಗಿಸಲಾಗಿದೆ (ಮೊಬೈಲ್ ಹಿಂಭಾಗದ ಕ್ಯಾಮೆರಾ). ಈ ಹಿಂಭಾಗದ ಕ್ಯಾಮೆರಾ 50MP ವೈಡ್ ಲೆನ್ಸ್ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ನಲ್ಲಿ ತಯಾರಿಸಲಾಗಿದೆ. ಇದು 4K ವಿಡಿಯೋವನ್ನು 30fps ಮತ್ತು 1080p ವಿಡಿಯೋವನ್ನು ಗರಿಷ್ಠ 120fps ನಲ್ಲಿ ರೆಕಾರ್ಡ್ ಮಾಡುತ್ತದೆ. ಸೆಲ್ಫಿಗಾಗಿ, 32MP ಫ್ರಂಟ್ ಕ್ಯಾಮೆರಾ ನೀಡಿದ್ದು, ಸ್ಪಷ್ಟ ಸೆಲ್ಫಿ ಹಾಗೂ ಉತ್ತಮ ಗುಣಮಟ್ಟದ ವೀಡಿಯೋ ಕಾಲ್‌ಗಳಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.

ಬ್ಯಾಟರಿ ಮತ್ತು ಆಡಿಯೋ

Moto G86 ಅಂದರೆ 5200mAh ಬ್ಯಾಟರಿ ಪವರ್ ಮಾಡುತ್ತಿದೆ. ಈ ಮೊಬೈಲಿನಲ್ಲಿ 30W ಫಾಸ್ಟ್ ಚಾರ್ಜಿಂಗ್ ಮಾಡುವ ಸಾಮರ್ಥ್ಯವಿದ್ದು, ಕಡಿಮೆ ಸಮಯದಲ್ಲಿ ಅತಿ ಬೇಗನೆ ಸಂಪೂರ್ಣ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಆಡಿಯೋ ವಿಭಾಗದ ಬಗ್ಗೆ ಹೇಳುವುದಾದರೆ, ಈ ಫೋನ್‌ನಲ್ಲಿ ಡಾಲ್ಬಿ ಅಟ್ಮೋಸ್ ಸಪೋರ್ಟ್ ಹೊಂದಿದ ಸ್ಟೀರಿಯೋ ಸ್ಪೀಕರ್‌ಗಳು ನೀಡಲ್ಪಟ್ಟಿವೆ, ಇದರಿಂದ ಮನರಂಜನೆ ಮತ್ತು ಗೇಮಿಂಗ್ ಅನುಭವ ಇನ್ನಷ್ಟು ಆಕರ್ಷಕವಾಗಿದೆ.

ಹೆಚ್ಚುವರಿ ವೈಶಿಷ್ಟ್ಯಗಳು

Moto G86 ನಲ್ಲಿ ಇನ್ನೂ ಹಲವಾರು ಅಡ್ವಾನ್ಸ್ಡ್ ಫೀಚರ್‌ಗಳು ಲಭ್ಯವಿವೆ. ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಅಕ್ಸೆಲರೋಮೀಟರ್, ಜೈರೋಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್, ಕಂಪಾಸ್ ಮತ್ತು ಸ್ಮಾರ್ಟ್ ಕನೆಕ್ಟ್ ಸಪೋರ್ಟ್ ಇದರ ಭಾಗವಾಗಿದೆ. ಇವುಗಳೆಲ್ಲವೂ ಒಟ್ಟಾಗಿ ಬಳಕೆದಾರರಿಗೆ ಉತ್ತಮ ಅನುಭವ ಒದಗಿಸುತ್ತವೆ.

ಹಕ್ಕು ನಿರಾಕರಣೆ: ಮೇಲಿನ ವಿಶೇಷತೆಗಳು, ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು ಬರೆಯುವ ಸಮಯದಲ್ಲಿ ಸರಿಯಾಗಿವೆ. ಆದರೆ ಅವು ಸಮಯದೊಂದಿಗೆ ಅಥವಾ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು. ತಾಜಾ ಮಾಹಿತಿಗಾಗಿ ಮೋಟೋರೋಲಾ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಸ್ಟೋರ್‌ನಲ್ಲಿ ಪರಿಶೀಲಿಸಿ.

By ಸುಖೇಶ್ ಶಾನಭಾಗ್ Updated: Tuesday, August 26, 2025, 14:59 [IST]


Scroll to Top